BJPs protest over coastal Karnataka neglected in Budget 2018: Congress may have to face severe set back in Loksabha election 2019. JDS has no base in three parliament segment in coastal belt including Chikkamagaluru. There is a straight fight between BJP and Congress.
ಬಜೆಟ್ ಅಧಿವೇಶನದ ವೇಳೆ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಶಾಸಕರನ್ನು ಸಂದರ್ಶಿಸಿದಾಗ, ಅವರೆಲ್ಲರ ಒಕ್ಕೂರಿಲಿನ ಧ್ವನಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ, ಬಜೆಟ್ ನಲ್ಲಿ ಕರಾವಳಿಯನ್ನು ನೆಗ್ಲೆಕ್ಟ್ ಮಾಡಿದೆ ಎನ್ನುವುದು. ಬಜೆಟಿನಲ್ಲಿ ಕರಾವಳಿಯನ್ನು ಕಡೆಗಣಿಸಲಾಗಿದೆ ಎನ್ನುವುದನ್ನು ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಭಾಗದ ಜನರ ಮನಸಿನಲ್ಲಿ ಬೇರೂರಿಸುವಲ್ಲಿ ಬಿಜೆಪಿ ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ. ಇದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಂಗ್ರೆಸ್ಸಿಗೆ ತೀವ್ರ ಹಿನ್ನಡೆ ತಂದೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.